(ಶಾಲಿವಾಹನ ಶಕೆ 1789 ಪ್ರಭವನಾಮ ಸಂವತ್ಸರ ಭಾದ್ರಪದ ಶುದ್ಧತ್ರಯೋದಶಿ ಬುಧವಾರ ಶ್ರವಣ ನಕ್ಷತ್ರ) -ಭೂಲೋಕಾವತರಣ, ಶುದ್ಧತ್ರಯೋದಶಿ ಬುಧವಾರ ಶ್ರವಣ ನಕ್ಷತ್ರ) -ಭೂಲೋಕಾವತರಣ.ಕಾವತರಣ.

(ಶಾಲಿವಾಹನ ಶಕೆ 1789 ಪ್ರಭವನಾಮ ಸಂವತ್ಸರ ಭಾದ್ರಪದ ಶುದ್ಧತ್ರಯೋದಶಿ ಬುಧವಾರ ಶ್ರವಣ ನಕ್ಷತ್ರ) -ಭೂಲೋಕಾವತರಣ, ಶುದ್ಧತ್ರಯೋದಶಿ ಬುಧವಾರ ಶ್ರವಣ ನಕ್ಷತ್ರ) -ಭೂಲೋಕಾವತರಣ.ಕಾವತರಣ.
ಪ್ರಾಥಮಿಕ ವಿದ್ಯಾಭ್ಯಾಸ, ಜೋಯಿಸರ ಹರಳಹಳ್ಳಿಯ ಆಗಿನ ಗಾಂವ ಶಾಲೆಯಲ್ಲಿ ಮೂರನೇ ತರಗತಿವರೆಗೆ.
ಲಿಂಗದೀಕ್ಷೆ ಮನೆ-ಊರು ತೊರೆದು ವಿದ್ಯಾಭ್ಯಾಸ ಮುಂದುವರಿಸಲು ಕಜ್ಜರಿಗೆ ಪ್ರಯಾಣ.
ಕಜ್ಜರಿಯಲ್ಲಿ ನಾಲ್ಕನೇ ತರಗತಿಯಿಂದ ಮುಲಕೀ ಪರೀಕ್ಷೆವರೆಗೆ ಅಭ್ಯಾಸ, ಮುಲಕೀ ಪರೀಕ್ಷೆಯಲ್ಲಿ ಅನುತ್ತೀರ್ಣ.
ಲಿಂಗದಹಳ್ಳಿಗೆ ಆಗಮನ. ಗಾಂವರೀ ಶಾಲೆ ನಡೆಸಿ ಮಕ್ಕಳಿಗೆ ಶಿಕ್ಷಣ ನೀಡಿದ್ದು, ನಿಜಗುಣ ಕೃತಿಗಳ ಅಧ್ಯಯನ ಆರಂಭ. ತಾಯಿ ನೀಲಮ್ಮನವರು ಮದುವೆಯಾಗಿ ಸಂಸಾರಿಯಾಗಲು ಒತ್ತಾಯಿಸಿದ್ದಕ್ಕೆ ಒಪ್ಪದೆ ಗಳಿಕೆಯ ಮುನ್ನೂರು ರೂಪಾಯಿ ಅರ್ಪಿಸಿ ಹುಬ್ಬಳ್ಳಿಯತ್ತ ಪ್ರಯಾಣ.
ಹುಬ್ಬಳ್ಳಿ ವಾಸ, ರುದ್ರಾಕ್ಷಿಮಠದಲ್ಲಿ ವಾಸ್ತವ್ಯದೊಂದಿಗೆ ಸ್ನಾನ-ಪೂಜೆ, ಭಿಕ್ಷಾಟನೆಯಿಂದ ಪ್ರಸಾದ ಅರ್ಪಿತ, ಸಿದ್ದಾರೂಢ ಮಠದಲ್ಲಿನ ಅಧ್ಯಾತ್ಮ ಪ್ರವಚನ ಶ್ರವಣಕ್ಕೆ ಹೋಗುತ್ತಿದ್ದುದು.
ಇಷ್ಟಲಿಂಗ ಜಿಜ್ಞಾಸೆಯಲ್ಲಿ ಎಮ್ಮಿಗನೂರು ಶ್ರೀ ಜಡೆಸಿದ್ಧರ ದರ್ಶನಕ್ಕೆ ಬಳ್ಳಾರಿ ಪ್ರಾಂತದತ್ತ ಪಾದಯಾತ್ರೆ, ಶ್ರೀ ಜಡೆಸಿದ್ದರ ದರ್ಶನ, ಇಷ್ಟಲಿಂಗ ಜಿಜ್ಞಾಸೆ ಪರಿಹಾರ. ಮರಳಿ ಹುಬ್ಬಳ್ಳಿಗೆ ಆಗಮನ, ತಮ್ಮ ನಿಜಗುರು ಶ್ರೀ ಬಸವಲಿಂಗ ಸ್ವಾಮಿಗಳ ದರ್ಶನ.
ಎಳಂದೂರು ಶ್ರೀ ಬಸವಲಿಂಗ ಸ್ವಾಮಿಗಳಲ್ಲಿ, ಶಿಷ್ಯವೃತ್ತಿ, ಅವರೊಂದಿಗೆ ದೇಶ ಸಂಚಾರ, ಪಂಚಯೋಗಗಳ ಅರಿವು, ಶಿವಯೋಗ ಸಾಧನಾ ಮಾರ್ಗದ ಸ್ಪಷ್ಟತೆ. ಶಂಭುಲಿಂಗನ ಬೆಟ್ಟದಲ್ಲಿ ಶ್ರೀ ಬಸವಲಿಂಗ ಸ್ವಾಮಿಗಳ ಅನುಷ್ಠಾನ. ಅನುಷ್ಠಾನಾಂತ್ಯದಲ್ಲಿ, ಚಿನ್ಮಯ ದೀಕ್ಷಾನುಗ್ರಹ.
ಅಣ್ಣಿಗೇರಿಯತ್ತ ಆಗಮಿಸಿದ ಶ್ರೀ ಬಸವಲಿಂಗ ಸ್ವಾಮಿಗಳ ಲಿಂಗೈಕ್ಯ ಶ್ರೀ ಗುರುಬಸವರ ಗದ್ದುಗೆಯಲ್ಲಿ ಅನುಷ್ಠಾನ ನಡೆಸಲು ಸೊರಬ ತಾಲೂಕಿನ ಕ್ಯಾಸನೂರಿನತ್ತ ಪ್ರಯಾಣ, ಕ್ಯಾಸನೂರಿನಿಂದ ಹಾನಗಲ್ ಶ್ರೀಮಠದ ಫಕೀರಸ್ವಾಮಿಗಳ ದರ್ಶನಕ್ಕೆ ಹೋದದ್ದು. ಶ್ರೀಮಠದ ಪೀಠಾಧಿಕಾರ ಪಡೆಯಲು ಶ್ರೀ ಫಕೀರ ಸ್ವಾಮಿಗಳಿಂದ ಪ್ರಸ್ತಾಪ.
ಹಾನಗಲ್ ಶ್ರೀಮಠದ ಶ್ರೀ ಫಕೀರ ಸ್ವಾಮಿಗಳ ಲಿಂಗೈಕ್ಯ. ಬಿದರಿ ಶ್ರೀ ಕುಮಾರ ಸ್ವಾಮಿಗಳಿಂದ 'ನಿರಂಜನ ಸ್ಥಲ' ದೀಕ್ಷೆಯೊಂದಿಗೆ ಶ್ರೀ ಮಠದ ಪಟ್ಟಾಧಿಕಾರ; ಶ್ರೀ ಮ.ನಿ.ಪ್ರ. ಕುಮಾರ ಸದಾಶಿವ ಸ್ವಾಮಿಗಳು ಎಂಬ ಅಭಿದಾನ.
ನಾಡಿನಲ್ಲಿ ಬರಗಾಲ, ಶ್ರೀಮಠದಲ್ಲಿ ಬರಪೀಡಿತರಿಗೆ ದಾಸೋಹ.
ಹಾನಗಲ್ ಶ್ರೀಮಠದಲ್ಲಿ ಪಾಠಶಾಲೆ ಆರಂಭ, ವಿದ್ಯಾರ್ಥಿಗಳಿಗೆ ವಸತಿ- ಪ್ರಸಾದ ವ್ಯವಸ್ಥೆ. ಧರ್ಮೋತೇಜನ ಸಭೆಗಳ ಆರಂಭ, ಗ್ರಾಮ ಪಟ್ಟಣಗಳಲ್ಲಿ ಸಭೆಗಳನ್ನು ಕೂಡಿಸುತ್ತ ಸಮಾಜ ಜಾಗೃತಿಗೆ ಸಮಾಲೋಚನಾ ಸಭೆಗಳು.
ಕಾಡಶೆಟ್ಟಿಹಳ್ಳಿಯಲ್ಲಿ ಈರ್ವರು ಅಂಧ ಬಾಲಕರ ಹಾಡು ಕೇಳಿ ತಮ್ಮ ವಶಕ್ಕೆ ಪಡೆದದ್ದು. ಗದಿಗೆಯ್ಯನೆಂಬ ಬಾಲಕ ಸಂಗೀತ ಶಿಕ್ಷಣದಲ್ಲಿ ಪಂಚಾಕ್ಷರಿ ಗವಾಯಿಯೆಂದು ಪ್ರಖ್ಯಾತನಾಗಲು ಶ್ರೀಗುರುವಿನ ಅನುಗ್ರಹ.
ವೀರಶೈವ ಮಹಾಸಭೆ ಸ್ಥಾಪನೆಗೆ ಚಿಂತನೆ. ಪೂರ್ವಭಾವಿ ಸಭೆಗಳು.
ಧಾರವಾಡದಲ್ಲಿ ವೀರಶೈವ ಮಹಾಸಭೆಯ ಮೊದಲ ಸಮ್ಮೇಳನದ ಚರಿತ್ರಾರ್ಹ ಘಟನೆ.
ಬಾಗಲಕೋಟೆ ಶ್ರೀ ವೈರಾಗ್ಯಮಲ್ಲಣಾರ್ಯರ ಲಿಂಗೈಕ್ಯ, ಬಾಗಲಕೋಟೆ ವೀರಶೈವ ಮಹಾಸಭೆಯಲ್ಲಿ ಶಿವಯೋಗ ಮಂದಿರ ಸ್ಥಾಪನೆಗೆ ನಿರ್ಣಯ ಮಂಡನೆ.
ಶ್ರೀ ಶಿವಬಸವ ಸ್ವಾಮಿಗಳಿಗೆ ಹಾವೇರಿಯ ಹುಕ್ಕೇರಿ ಮಠದ ಪಟ್ಟಾಧಿಕಾರ.
ಇಲಕಲ್ ಶ್ರೀ ವಿಜಯಮಹಾಂತ ಸ್ವಾಮಿಗಳು ತೋರಿದ ಮಲಾಪಹಾರಿಣಿ ತಟದ ಸ್ಥಾನದಲ್ಲಿ (ಶಾ.ಶ. 1830 ಸಂವತ್ಸರ ಮಾಘ ಶುದ್ಧ ರಥಸಪ್ತಮಿಯಂದು) ಶಿವಯೋಗ ಮಂದಿರ ವಿದ್ಯುಕ್ತವಾಗಿ ಸ್ಥಾಪನೆ. ಏಳು ಸಾಧಕರಿಗೆ ಶಿವಯೋಗ ಮಾರ್ಗದ ಶಿಕ್ಷಣಾರಂಭ.
ಇಲಕಲ್ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಲಿಂಗೈಕ್ಯ
ಬಿದರಿ ಶ್ರೀ ಕುಮಾರ ಸ್ವಾಮಿಗಳ ಲಿಂಗೈಕ್ಯ.
ಬಸವ ಜಯಂತಿಯಂದು ರೋಣ ತಾಲೂಕು ನಿಡಗುಂದಿಕೊಪ್ಪದಲ್ಲಿ ಶಾಖಾ ಶಿವಯೋಗಮಂದಿರ ಸ್ಥಾಪನೆ.ಶಿಕಾರಿಪುರ ತಾಲೂಕು ಮಾಳಗೊಂಡಕೊಪ್ಪ ಅನಿಮಿಷಾರ್ಯ ತಪೋಭೂಮಿಯಲ್ಲಿ ಕಣ್ಣೂರು ಲಿಂಗಪ್ಪ ಶರಣರಿಂದ ವೀರಶೈವ ಪರಂಪರೆಯ ಉದ್ದರಣೆ ಸಾಹಿತ್ಯ ಕುರಿತು ಹದಿನೈದು ದಿನಗಳ ವಿಶೇಷ ಪ್ರವಚನಕ್ಕೆ ಆಯೋಜನೆ.
ಶಿಕಾರಿಪುರ ಸಮೀಪ ಕುಮುದ್ವತಿ-ವೃಷಭ ನದಿ ಸಂಗಮ ಸ್ಥಳದಲ್ಲಿ ಇಂದಿನ ಕಾಳೇನಹಳ್ಳಿ ಹೊರ ಅಂಚಿನಲ್ಲಿ ಶಾಖಾ ಶಿವಯೋಗಾಶ್ರಮ ಸ್ಥಾಪನೆ.
ಶಿವಯೋಗ ಮಂದಿರದ ವಟು-ಸಾಧಕರು ಹಾಗೂ ಗದಗಿನ ಶ್ರೀ ತೋಂಟದಾರ್ಯ ಮಠದ ಜಗದ್ಗುರು ಶ್ರೀ ಸಿದ್ದೇಶ್ವರ ಸ್ವಾಮಿಗಳೊಂದಿಗೆ ಶ್ರೀ ಎಡೆಯೂರು ಕ್ಷೇತ್ರಕ್ಕೆ ಯಾತ್ರೆ.
ಬಾಗಲಕೋಟೆ ಕರವೀರಮಠದ ಶ್ರೀಶಾಂತವೀರ ಸ್ವಾಮಿಗಳು ಲಿಂಗೈಕ್ಯರಾಗುವ ಸಮಯಕ್ಕೆ ಬಾಗಲಕೋಟೆ ತಲುಪಲು ಉಗಿಬಂಡಿ (ರೈಲು) ಏರಿ ಪ್ರಯಾಣ ಮಾಡಿದ್ದು.
ಕಟ್ಟೂರು ಲಿಂಗಪ್ಪ ಶರಣರ ಲಿಂಗೈಕ್ಯ. ಸೊಲ್ಲಾಪುರದಲ್ಲಿ ನಾಲತ್ವಾಡ ಶ್ರೀ ವೀರೇಶ್ವರ ಶರಣರ ಲಿಂಗೈಕ್ಯ, ಶರಣರಿಗೆ ಪಾದೋದಕ ನೀಡಿದ್ದು.
ಪರಳಿ ಪ್ರಕರಣದ ಹಿನ್ನೆಲೆಯಲ್ಲಿ ಹೈದರಾಬಾದಿಗೆ ಪ್ರಯಾಣ. ವಿವಾದದಲ್ಲಿ ಜಯ ಪಡೆದದ್ದು.
ಹಾನಗಲ್ ಶ್ರೀಮಠಕ್ಕೆ ಶ್ರೀ ಮಹೇಶ್ವರ ಸ್ವಾಮಿಗಳಿಗೆ ಪಟ್ಟಾಧಿಕಾರ.
ಇಲಕಲ್ ಶ್ರೀಮಠಕ್ಕೆ ಶ್ರೀ ಗುರು ಮಹಾಂತ ಸ್ವಾಮಿಗಳಿಗೆ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಭಾಗಿಯಾದದ್ದು.
ಕುಮುದ್ವತಿ-ತುಂಗಭದ್ರ ಸಂಗಮಸ್ಥಳ ಸಂಗಮೇಶ್ವರ ದೇವಾಲಯದಲ್ಲಿ ಇಪ್ಪತ್ತೊಂದು ದಿನಗಳ ಅನುಷ್ಠಾನ. ಅನುಷ್ಠಾನಾಂತ್ಯದಲ್ಲಿ ಅಸ್ವಸ್ಥತೆ- ಚಿಕಿತ್ಸೆಗೆ ನಿರಾಕರಣೆ. ಮಾಘ ಹುಳ ಸಪ್ತಮಿಯಂದು ಲೀಲಾವತಾರಕ್ಕೆ ಮಹಾಮಂಗಳ ಹಾಡಿ ಲಿಂಗೈಕ್ಯರಾದದ್ದು. ಶಿವಯೋಗ ಮಂದಿರದಲ್ಲಿ ಮಹಾಸಮಾಧಿ.