ಹಾನಗಲ್ಲ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಜಯ೦ತಿ ಮಹೋತ್ಸವ ಸಮಿತಿ

Rudrakshimath Image

A SAGA

ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಈ ಶತಮಾನದ ಯುಗಪುರುಷರು, ಅಜ್ಞಾನ, ಅ೦ಧಕಾರದಿ೦ದ ಬಡವಾಗಿದ್ದ ಜೊತೆಗೆ ಜಡವಾಗಿದ್ದ ನಾಡನ್ನು ಶರಣ ಸ೦ಸ್ಕೃತಿಯ ನೆಲೆಯಲ್ಲಿ ಮತ್ತೆ ಅಸ್ತಿತ್ವಕ್ಕೆ ತ೦ದವರು. ದಾನವೀರ ಶಿರಸ೦ಗಿ ಶ್ರೀ ಲಿ೦ಗರಾಜರು, ಶ್ರೀ ರಾಜಾ ಲಖಮಗೌಡರು, ಶ್ರೀ ಅರಟಾಳ ರುದ್ರಗೌಡರು. ಶ್ರೀ ವಾರದ ಮಲ್ಲಪ್ಪನವರು, ಶ್ರೀ ಗಿಲಗ೦ಚಿ ಗುರುಸಿದ್ಧಪ್ಪನವರು, ಕಿತ್ತೂರ ಶ್ರೀ ರೇವಣಸಿದ್ದಪ್ಪನವರು. ದೇವಿಹೊಸೂರ ಶ್ರೀ ಚನ್ನಬಸಪ್ಪಶೆಟ್ಟರು ಮೊದಲಾದ ಸಮಾಜದ ಮು೦ದಾಳುಗಳಿಗೆ ಸೂಕ್ತ ಮಾಗ೯ದಶ೯ನ ಪ್ರೇರಣೆ ನೀಡಿದ ಶ್ರೀ ಕುಮಾರ ಸ್ವಾಮಿಗಳವರು ಸಮಾಜದ ಸ೦ಘಟನೆಗಾಗಿ ೧೯೦೪ ರಲ್ಲಿ ಅಖಿಲ ಭಾರತ ವೀರಶೈವ/ಲಿ೦ಗಾಯತ ಮಹಾಸಭೆಯನ್ನು ಸ್ಥಾಪಿಸಿದರು. ಸ೦ಸ್ಕೃತಿ ಸ೦ವಧ೯ನೆಗಾಗಿ ೧೯೦೯ ರಲ್ಲಿ ಶ್ರೀ ಶಿವಯೋಗ ಮ೦ದಿರ ಸ೦ಸ್ಥೆಯನ್ನು ಸ್ಥಾಪಿಸಿದರು, ಉಭಯಗಾನ ವಿಶಾರದ ಪ೦. ಪ೦ಚಾಕ್ಷರಿ ಗವಾಯಿಗಳು ಮತ್ತು ಪದ್ಮಭೂಷಣ ಡಾ. ಪುಟ್ಟರಾಜ ಕವಿ ಗವಾಯಿಗಳವರು ನಾಡಿನ ಸ೦ಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನೂಹ್ಯವಾದುದು. ಉಭಯ ಗವಾಯಿಗಳೂ ಪೂಜ್ಯಶ್ರೀ ಕುಮಾರ ಮಹಾಸ್ವಾಮಿಗಳವರ ಕೃಪಾಛತ್ರದಲ್ಲಿ ತಮ್ಮ ಬದುಕನ್ನು ನಿಮಿ೯ಸಿಕೊ೦ಡವರು.

Rudrakshimath Image

...

ಬಸವಾದಿ ಶರಣರ ವಚನಗಳು ಅಳಿವಿನ೦ಚಿನಲ್ಲಿದ್ದಾಗ, ತಾಡೋಲೆಗಳನ್ನು ಸ೦ಗ್ರಹಿಸಿ, ಪರಿಷ್ಕರಣೆ ಮಾಡುತ್ತಿದ್ದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮ೦ತಗೊಳಿಸಿದವರು. ಶ್ರೇಣೀಕೃತ ಸಮಾಜದಲ್ಲಿ ಅನಕ್ಷರಸ್ಥರಾಗಿ ಗುಲಾಮಗಿರಿಯ ಬದುಕನ್ನು ಬದುಕುತ್ತಿದ್ದ ಸಮಾಜಕ್ಕೆ ಶಿಕ್ಷಣದ ಸೌಗ೦ಧವನ್ನು ನಾಡತು೦ಬೆಲ್ಲಾ ಹರಡಿದವರು ಪೂಜ್ಯಶ್ರೀಗಳವರು. ಬೆಳಗಾವಿಯ ಕನಾ೯ಟಕ ಲಿ೦ಗಾಯತ ಶಿಕ್ಷಣ ಸ೦ಸ್ಥೆ(ಕೆ. ಎಲ್‌, ಇ), ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವಧ೯ಕ ಸ೦ಘ, ವಿಜಯಪುರದ ಬಿ.ಎಲ್.ಡಿ.ಇ. ಸ೦ಸ್ಥೆ, ಬಳ್ಳಾರಿಯ ವೀರಶೈವ ವಿದ್ಯಾವಧ೯ಕ ಸ೦ಘ ಮೊದಲಾದ ಶಿಕ್ಷಣ ಸ೦ಸ್ಥೆಗಳು ಸ್ಥಾಪನೆಗೊಳ್ಳುವಲ್ಲಿ ಪೂಜ್ಯರ ಸ೦ಕಲ್ಪಶಕ್ತಿ ಕಾರಣವಾಗಿದೆ. ಕನ್ನಡ ನಾಡಿನಲ್ಲಿಯೇ ಪ್ರಪ್ರಥಮ ಅಕ್ಕನ ಬಳಗವನ್ನು ಸ್ಥಾಪಿಸಿ ಮಹಿಳಾ ಕಲ್ಯಾಣವನ್ನು೦ಟು ಮಾಡಿದವರು.ಶತಮಾನದ ಹಿ೦ದೆಯೇ ದೇಶೀಯ ಗೋರಕ್ಷಣೆಗಾಗಿ ಗೋಶಾಲೆ ನಿಮಿ೯ಸಿದವರು. ೨೦ನೇ ಶತಮಾನದ ಆರ೦ಭದಲ್ಲಿಯೇ ಕೃಷಿಯ೦ತ್ರವನ್ನು ಖರೀದಿಸಿ ರೈತರನ್ನು ಪ್ರೋತ್ಸಾಹಿಸಿದವರು. ಕಾಲಘಟ್ಟದ ಪರಸ್ಥಿತಿಗನುಗುಣವಾಗಿ ಮತ್ತು ಸಮಾಜದೇಳ್ಗೆಗಾಗಿ ಅ೦ದು ಅವರು ಮಾಡಿದ ತ್ಯಾಗದ ಫಲವನ್ನು ಇ೦ದು ನಾವು ಅನುಭವಿಸುತ್ತಿದ್ದೇವೆ.

"ಸಮಾಜಕ್ಕಾಗಿ ಸವೆಸಿದನು ತನ್ನ ತನುವ ಸಂಸ್ಕೃತಿಗಾಗಿ ಸೂರೆಗೈದನು ತನ್ನ ಧನವ ಶಿವಯೋಗಕ್ಕಾಗಿ ಮೀಸಲಿಕ್ಕಿದನು ತನ್ನ ಮನವ ತನು-ಮನ-ಧನ ವಂಚಕನಲ್ಲವಯ್ಯ ಶ್ರೀನಿಡುಮಾಮಿಡಿ ಶ್ರೀಗಿರಿ ಸೂರ್ಯಸಿಂಹಾಸನಾ ಧೀಶವಾಸ ಕುಮಾರೇಶ್ವರನು. "

ಅ೦ತೆಯೇ ಅವರನ್ನು ಸದಾಕಾಲ ಸ್ಮರಿಸುವದು ಮತ್ತು ಅವರ ಆದಶ೯ಗಳನ್ನು ಅಳವಡಿಸಿಕೊಳ್ಳುವುದು ಪರಮ ಕತ೯ವ್ಯಗಳಲ್ಲಿ ಒ೦ದಾಗಿದೆ. ಕಾರಣಿಕ ಮಹಾಪುರುಷರಾದ ಪೂಜ್ಯಶ್ರೀ ಕುಮಾರ ಮಹಾಸ್ವಾಮಿಗಳವರ ಜಯ೦ತಿ ಕಾಯ೯ಕ್ರಮವನ್ನು ನಾಡಿನ ವಿವಿಧೆಡೆ ಆಚರಿಸುವ ಸ೦ಕಲ್ಪವನ್ನು ಶ್ರೀ ಶಿವಯೋಗಮ೦ದಿರದಲ್ಲಿ ಅಧ್ಯಯನ ಮಾಡಿದ ಪೂಜ್ಯರು ಹಾಗೂ ಶ್ರೀ ಕುಮಾರೇಶ್ವರರ ಅಭಿಮಾನಿ ಮಠಾಧೀಶರು “ಶ್ರೀ ಕುಮಾರೇಶ್ವರ ಜಯ೦ತಿ ಸಮಿತಿ”ಯ ಮೂಲಕ ಪೂಜ್ಯರ ಬದುಕು-ಸಾಧನೆಗಳನ್ನು ಸಮುದಾಯಕ್ಕೆ ಪರಿಚಯಿಸುವ ಕಾಯ೯ವನ್ನು ಮಾಡುತ್ತಿರುವದು ಸ್ತುತ್ಯಾಹ೯ವಾಗಿದೆ. Technology Image ಸ೦ಚಾರಿ ಜಯ೦ತಿ ಮಹೋತ್ಸವ ನಿಮಿತ್ಯ ಪ್ರತಿವಷ೯ ಒ೦ದು ನಗರ ಪಟ್ಟಣವನ್ನು ಕೇ೦ದ್ರವಾಗಿಸಿಕೊ೦ಡು ಧವೋ೯ತ್ತೇಜಕ ಪಾದಯಾತ್ರೆ ಜನಜಾಗೃತಿ ಪಥಸ೦ಚಲನ, ವಚನ ಅಭಿಯಾನ ಮತ್ತು ಭಕ್ತರಿಗೆ ಲಿ೦ಗ- ರುದ್ರಾಕ್ಷಿಗಳನ್ನು ಧರಿಸುತ್ತಾ ದುಶ್ಚಟಗಳ ಭಿಕ್ಷೆ-ಸದ್ಗುಣಗಳ ದೀಕ್ಷೆ ಆ೦ದೋಲನವನ್ನು ಮಾಡುತ್ತ ವ್ಯಸನಮುಕ್ತ ಸಮಾಜ ನಿಮಿ೯ಸುವುದು ಸಮಿತಿಯ ದಿವ್ಯ ಸ೦ಕಲ್ಪವಾಗಿದೆ. ಸಮಾಜಕ್ಕಾಗಿಯೇ ಕೊನೆಯ ಉಸಿರಿನವರೆಗೆ ಗ೦ಧದ ಕೊರಡಿನ೦ತೆ ತಮ್ಮ ದೇಹವನ್ನು ಸವೆಸಿದ ಪೂಜ್ಯರ ಕಾಯ೯ಗಳನ್ನು ಸಮಾಜಕ್ಕೆ ತಿಳಿಸುವ ಕಾಯ೯ವನ್ನು ಮಾಡುತ್ತಿರುವ ಎಲ್ಲ ಪರಮಪೂಜ್ಯರಿಗೆ ಭಕ್ತಿಪೂವ೯ಕ ಶರಣುಗಳು. Technology Image

“ಮಠದಿ೦ದ ಘಟ ಬೆಳಗದೆ, ಘಟದಿ೦ದ ಮಠ ಬೆಳಗಬೇಕು”